Jul 29 : ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶುಭ ಕೋರುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಗಳಾದ ಹಂಸಿನಿ, ಸುಶಾಂತ್, ಕಾನಿಶ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಶಿಕ್ಷಕಿ ಕವಿತಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶನ ನೀಡಿ ಶುಭಾಶಯವನ್ನು ಕೋರಿದರು. 2019-20ನೇ ಸಾಲಿನ ಎಸ್, ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕರಣ್, ಅವನಿ ಹೆಗ್ಡೆ, ಜೋಯಲ್ ಮಸ್ಕರೇನಸ್, ವಿಯಾನ್ ಜೋವಾನ್ ಡಿಸೋಜ, ಲೇಖಾ, ಪ್ರಿಯಾಂಕ, ಪ್ರಿನ್ಸಿಟಾ ಡಿಸೋಜ ಇವರನ್ನು ಸನ್ಮಾನಿಸಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು.

ವಿದ್ಯಾರ್ಜನೆಯ ಎಲ್ಲ ಮೆಟ್ಟಿಲುಗಳನ್ನು ಹಂತ ಹಂತವಾಗಿ ಏರಿ ಜೀವನದಲ್ಲಿ ಯಶಸ್ಸನ್ನು ಗಳಿಸುವಂತಾಗಲಿ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಜೇಸನ್ ಮೋನಿಸ್ ರವರು ಶುಭ ಹಾರೈಸಿದರು. ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಬೇಕೆಂದು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಮಮತಾ ಶೆಟ್ಟಿ ನುಡಿದರು. ಶಾಲಾ ಸಂಚಾಲಕರಾದ ಅತಿ ವಂ. ಫಾ. ಜೋಸೆಫ್ ಅಲ್ಫೋನ್ಸ್ ಕಾರ್ಡೋಜ ರವರು ಧನಾತ್ಮಕ ಚಿಂತನೆ, ನಂಬಿಕೆ , ಭಕ್ತಿ ಹಾಗೂ ಬದ್ಧತೆ ಎಂಬ ಜೀವನ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯವನ್ನು ಹೊಂದಿ ಎಂಬ ಕಿವಿಮಾತಿನೊಂದಿಗೆ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.

ವಿದ್ಯಾರ್ಥಿ ಮೆಲ್ವಿನ್ ಸುಶ್ರಾವ್ಯವಾಗಿ ಹಾಡಿದರು. ಸಹಶಿಕ್ಷಕಿಯರಾದ ಕು. ದಿವ್ಯ ಸ್ವಾಗತಿಸಿ, ಶ್ರೀಮತಿ ಮೇರಿ ಸುಜಾ ವಂದಿಸಿ, ಶ್ರೀಮತಿ ರೆನಿಟಾ ಲಸ್ರಾದೊ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: 2440524; 2440525; 8277937782

E-Mail: [email protected]