Dec 13, 2019 : ಹೋಲಿ ರಿಡೀಮರ್ ಶಾಲಾ ವಾರ್ಷಿಕೋತ್ಸವವು ಡಿ. 12 ರಂದು ನೆರವೇರಿತು. ಶಾಲಾ ವಾರ್ಷಿಕೋತ್ಸವವೆಂದರೆ ಒಂದು ಹಬ್ಬವಿದ್ದಂತೆ; ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಿಗುವ ಸದಾವಕಾಶ. ಶಾಲೆ ಮತ್ತು ಅರಣ್ಯ ಇಲಾಖೆಯ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾದ ಬೆಳ್ತಂಗಡಿ ವನ್ಯಜೀವಿವಲಯದ ವಲಯಾರಣ್ಯಾಧಿಕಾರಿ ಶ್ರೀ ಸುಬ್ಬಯ್ಯ ನಾಯ್ಕ್‍ರವರು ನುಡಿದರು. ಶಿಕ್ಷಣವು ಪಡೆಯುವಾಗ ಕಹಿಯಾಗಿರುತ್ತದೆ; ಆದರೆ ಅದರ ಫಲವು ತುಂಬ ಸಿಹಿಯಾಗಿರುತ್ತದೆ. ವಾರ್ಷಿಕೋತ್ಸವವು ಎಲ್ಲರ ಆಸಕ್ತಿ, ಪರಿಶ್ರಮ ಮತ್ತು ದೇವರ ಕೃಪೆಯಿಂದ ಯಶಸ್ವಿಯಾಗಲಿ ಎಂದು ಶಾಲಾ ಸಂಚಾಲಕರಾದ ವಂ. ಫಾ. ಬೊನವೆಂಚರ್ ನಝ್ರೆತ್ ರವರು ಶುಭಹಾರೈಸಿದರು. ವಿವಿಧ ತಂಡಗಳ ವಿದ್ಯಾರ್ಥಿಗಳು ಅಮೋಘವಾಗಿ ದೈಹಿಕ ಕವಾಯತ್ತನ್ನು ಪ್ರದರ್ಶಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಕಲಿಕೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಮಸ್ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳ್ತಂಗಡಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಶ್ರೀ ನಾಗೇಶ್‍ರವರು, ವಿದ್ಯಾರ್ಥಿಗಳು ತಮ್ಮ ಪೋಷಕರು ಮತ್ತು ಶಿಕ್ಷಕರ ಸಹಕಾರ ಮತ್ತು ಮಾರ್ಗದರ್ಶನದಿಂದ ಉತ್ತಮ ಭವಿಷ್ಯವನ್ನು ಹೊಂದುವಂತಾಗಲಿ ಎಂದು ಶುಭಹಾರೈಸಿದರು. ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು.

ಸಮಾರಂಭದಲ್ಲಿ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕೆ. ಎಮ್. ಆನಂದ್ ಮತ್ತು ಶ್ರೀ ಸತೀಶ್ , ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಮತ ಶೆಟ್ಟಿ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪೌಲಿನ್ ರೇಗೋ , ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಲೊಬೋ, ಕ್ರೀಡಾ ಪ್ರತಿನಿಧಿ ಶ್ರೀ ವಿನ್ಸೆಂಟ್ ಡಿಸೋಜ, ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೆನ್ನಿ ವಾಸ್ ಉಪಸ್ಥಿತರಿದ್ದರು.

ಜೀವನ ಮೌಲ್ಯ, ದೇಶಭಕ್ತಿ, ಪರಿಸರ, ಕ್ರೀಡೆ, ಮಾದಕ ದ್ರವ್ಯಗಳ ಕುರಿತು ಜಾಗೃತಿ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ನೃತ್ಯ, ರೂಪಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ ಜೇಸನ್ ಮೋನಿಸ್‍ರವರ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದಿಂದ ವಾರ್ಷಿಕೋತ್ಸವವು ಯಶಸ್ವಿಗೊಂಡಿತು.

ವಿದ್ಯಾರ್ಥಿಗಳಾದ ಪ್ರಿನ್ಸಿಟಾ ಡಿಸೋಜ, ವಿಯಾನ್ ಡಿಸೋಜ ಮತ್ತು ಲವಿಶಾ ಲೋಬೊರವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಆನ್ಸೆಲ್ಮಾ ಡಿಸೋಜ ಮತ್ತು ಸಹಶಿಕ್ಷಕಿ ಶ್ರೀಮತಿ ಬ್ಲೆಂಡಿನ್ ರೋಡ್ರಿಗಸ್ ಸ್ವಾಗತಿಸಿ, ವಿದ್ಯಾರ್ಥಿನಿ ವಿಲಿಟಾ ಲೋಬೋ ಮತ್ತು ಸಹಶಿಕ್ಷಕಿ ಶ್ರೀಮತಿ ರೆನಿಟಾ ಲಸ್ರಾದೊ ವಂದಿಸಿದರು. ಸಹಶಿಕ್ಷಕಿಯರಾದ ಕು. ಕವಿತಾ, ಕು. ವಿನಿತಾ ಮೋರಸ್, ಶ್ರೀಮತಿ ಅಖಿದಾಬಾನು ಸಹಕರಿಸಿದರು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]