Nov 25 : ವಿದ್ಯಾರ್ಥಿಗಳು ಪಾಠಗಳ ಕಲಿಕೆಗೆ ಮಾತ್ರ ಸೀಮಿತವಾಗಿರದೆ ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಮೂಡಿಸಿಕೊಳ್ಳಬೇಕು. ಮಕ್ಕಳಿಗೆ ಆಸಕ್ತಿ ತುಂಬುವ ಕಾರ್ಯವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕು. ಈ ನಿಟ್ಟಿನಲ್ಲಿ ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯು ಮಕ್ಕಳಿಗೆ ಬೆಂಕಿಯಿಲ್ಲದೆ ಆಹಾರ ತಯಾರಿಸುವ ಸ್ಪರ್ಧೆ ಮತ್ತು ವಿಭಿನ್ನ ಚಿಂತನಾ ಸಾಮಥ್ರ್ಯವನ್ನು ಮೂಡಿಸಲು ಸಂಗ್ರಹಿಸಿದ ಪತ್ರಿಕೆಗಳ ತುಣುಕುಗಳಿಂದ ಕೊಲ್ಯಾಜ್ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.

ಶಾಲಾ ಸಂಚಾಲಕರಾದ ವಂ. ಫಾ. ಬೊನವೆಂಚರ್ ನಝ್ರೇತ್ ವಿದ್ಯಾರ್ಥಿಗಳ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು. ಮುಖ್ಯೋಪಾಧ್ಯಾಯರಾದ ವಂ. ಫಾ. ಜೇಸನ್ ಮೋನಿಸ್ ರವರ ಮಾರ್ಗದರ್ಶನ ಮತ್ತು ಶಿಕ್ಷಕ ವೃಂದದ ಸಹಕಾರದಿಂದ ಸ್ಪರ್ಧೆಗಳನ್ನು ಯಶಸ್ವಿಗೊಳಿಸಲಾಯಿತು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]