Oct 22 : ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ಅ. 19 ರಂದು ವಿಜ್ಞಾನ ಮಾದರಿಗಳು, ದೇಶೀಯ ಮತ್ತು ವಿದೇಶಿ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಮತ್ತು ಕೈ ತೊಳೆಯುವ ದಿನವನ್ನು ಆಚರಿಸಲಾಯಿತು. ಶಾಲಾ ಸಂಚಾಲಕರಾದ ವಂ. ಫಾ. ಬೊನವೆಂಚರ್ ನಝ್ರೆತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ , ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಮತ್ತು ಸೃಜನಶೀಲತೆಯಿಂದ ವೈಜ್ಞಾನಿಕ ಮನೋಭಾವನೆಯನ್ನು ಹೊಂದಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಜೇಸನ್ ಮೋನಿಸ್ ರವರು ಕೈ ತೊಳೆಯುವ ದಿನದ ಮಹತ್ವವನ್ನು ತಿಳಿಸಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ವಿದ್ಯಾರ್ಥಿಗಳು ಆಸಕ್ತಿ ಹಾಗೂ ಸೃಜನಶೀಲತೆಯಿಂದ ವಿಜ್ಞಾನ ಮಾದರಿಗಳ ತಯಾರಿ ಹಾಗು ಪ್ರದರ್ಶನದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿನಿ ಸ್ನೇಹಾ ಕಾರ್ಯಕ್ರಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು . ವಿಜ್ಞಾನ ಶಿಕ್ಷಕಿಯರಾದ ಕು. ಕವಿತಾ, ಶ್ರೀಮತಿ ಸುಜಾ, ಕು. ವಿನಿತಾ ಮತ್ತು ಶ್ರೀಮತಿ ಪ್ರಭಾ ಸಹಕರಿಸಿದರು.

ವಿದ್ಯಾರ್ಥಿನಿಯರಾದ ಲವಿಶಾ ಸ್ವಾಗತಿಸಿ, ಪ್ರಿನ್ಸಿಟಾ ವಂದಿಸಿ, ರಿಯೋನ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]