PRESS RELEASE :

June 9, 2017: The Annual Feast of St Anthony of Padua will be celebrated on the 13th of June. The Saint Anthony’s Ashram Jeppu whose Patron is Saint Anthony is in preparation mood.  Tredecina (thirteen days novena) has already started on the 31st of May. Devotees of St Anthony in large numbers have been attending this Novena Mass which is held at 12 noon at Jeppu Ashram.

As a remote preparation for the feast Triduum (three days novena) will be held on 10, 11 & 12th June at Milagres Church at 6 p.m. Fr Anil Kiran Fernandes SVD of Mulki Divine Centre will be the chief celebrant on Triduum days.

The main Festive Holy Mass will be celebrated by Most Rev Dr Aloysius Paul D’Souza at 6 p.m. along with the priests from and around the city at Milagres Church. Earlier during the day a Holy Mass will be celebrated at 8:15 a.m. for the elderly and sick people with a special prayer for them. At 4 p.m. Holy Mass will be celebrated in Malayalam. Fr Jestin James from Trissur will be the main celebrant. At 11 a.m. a Holy Mass will be celebrated by Msgr Denis Moras Prabhu the Vicar General of the Diocese for the inmates and special invitees at the Jeppu Ashram.

This year on 12th June the Devotion to St Anthony completes 119 years and steps into 120th years. To mark this occasion the Director along with his team has planned activities related to St Anthony’s Devotion and  Charity Works. The brochure containing the list of programmes will be released by the Bishop at the end of the solemn Holy Mass at Milagres.

 

ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ಸಂಭ್ರಮದ ತಯಾರಿ

ಜೂನ್ 13ನೇ ತಾರೀಕಿನಂದು ನಡೆಯಲಿರುವ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ಜೆಪ್ಪು ಸಂತ ಆಂತೋನಿ ಆಶ್ರಮ ವತಿಯಿಂದ ಸಂಭ್ರಮದ ತಯಾರಿ ನಡೆಯಲಾಗುತ್ತಿದೆ. ತ್ರೆದೇಸಿನ (13 ದಿನಗಳ ನವೇನ ಪ್ರಾರ್ಥನೆ) ಮೇ 31ನೇ ತಾರೀಕಿನಂದು ಆರಂಭಗೊಂಡಿದ್ದು ಜೂನ್ 12 ತನಕ ಈ ಪ್ರಾರ್ಥನೆ ನಡೆಯಲಿದೆ. ಜೆಪ್ಪು ಆಶ್ರಮದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಈ ಬಲಿಪೂಜೆಯಲ್ಲಿ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಹಬ್ಬಕ್ಕೆ ಸಮೀಪದ ತಯಾರಿಯಾಗಿ ತ್ರಿದುವುಮ್ (ಮೂರು ದಿನಗಳ) ನವೇನ ಪ್ರಾರ್ಥನೆ ಜೂನ್ ತಿಂಗಳ 10, 11 ಮತ್ತು 12 ನೇ ತಾರೀಕಿನಂದು ನಡೆಯಲಿದೆ. ಸಾಯಾಂಕಾಲ 6 ಗಂಟೆಗೆ ಬಲಿ ಪೂಜೆ ಮತ್ತು ನವೇನ ಪ್ರಾರ್ಥನೆ ಮಿಲಾಗ್ರಿಸ್ ಚರ್ಚ್‍ನಲ್ಲಿ ನಡೆಯಲಿದೆ. ಮೂಲ್ಕಿ ಡಿವೈನ್ ಕೇಂದ್ರದ ಫಾ. ಅನಿಲ್ ಕಿರನ್ ಫೆರ್ನಾಂಡಿಸ್ ಈ ಭಕ್ತಿ ಕಾರ್ಯಕ್ರಮವನ್ನು ನಡೆಸಿ ಕೊಡುವರು.

ಹಬ್ಬದ ದಿವಸ ಸಾಯಾಂಕಾಲ 6 ಗಂಟೆಗೆ ಅ. ವಂ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜ ರವರು ನಗರದ ಮತ್ತು ಸಮೀಪದ ಧರ್ಮಗುರುಗಳ ಜೊತೆ ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಲಿರುವರು. ಬೆಳಿಗ್ಗೆ 8.15 ಗಂಟೆಗೆ ಪ್ರಾಯಸ್ತರಿಗೆ ಮತ್ತು ಅಸ್ವಸ್ಥರಿಗೆ ಒಂದು ಬಲಿ ಪೂಜೆ ಇರುವುದು ಹಾಗೂ ಅವರಿಗೋಸ್ಕರ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಸಾಯಾಂಕಾಲ 4 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಕೇರಳದ ತ್ರಿಸುರ್‍ನ ಫಾ. ಜೆಸ್ಟಿನ್ ಜೇಮ್ಸ್ ಬಲಿಪೂಜೆಯನ್ನು ಅರ್ಪಿಸುವರು. ಬೆಳಗ್ಗೆ 11 ಗಂಟೆಗೆ ಜೆಪ್ಪು ಆಶ್ರಮದಲ್ಲಿ ಮೊ. ಡೆನಿಸ್ ಮೊರಾಸ್ ಪ್ರಭುರವರು ಆಶ್ರಮದ ನಿವಾಸಿಗಳಿಗೆ ಹಾಗೂ ವಿಶೇಷ ಆಹ್ವಾನಿತರಿಗೆ ಒಂದು ಬಲಿಪೂಜೆಯನ್ನು ಅರ್ಪಿಸುವರು.

ಮಂಗಳೂರಿನಲ್ಲಿ ದಿ. ಮೊ. ಎಂ. ಪಿ. ಕುಲಾಸೊರವರು ಸಂತ ಆಂತೋನಿಯವರ ವ್ಯವಸ್ಥಿತ ಭಕ್ತಿ ಆರಂಭ ಮಾಡಿ ಜೂನ್ ತಿಂಗಳ 12ನೇ ತಾರೀಕಿನಂದು 119 ವರ್ಷಗಳು ಸಂದಿ 120 ನೇ ವರ್ಷ ಆರಂಭಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಂತ ಆಂತೋನಿ ಆಶ್ರಮ ವತಿಯಿಂದ ವಾರ್ಷಿಕ ಯೋಜನೆಯನ್ನು ತಯಾರಿಸಲಾಗಿದೆ. ಈ ಯೋಜನೆಯ ವಿವರವುಳ್ಳ ಹಸ್ತಪತ್ರವನ್ನು ಹಬ್ಬದ ಸಂಭ್ರಮದ ಬಲಿಪೂಜೆಯ ನಂತರ ಧರ್ಮಾಧ್ಯಕ್ಷರು ಬಿಡುಗಡೆ ಮಾಡಲಿದ್ದಾರೆ.

 

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]