June 11, 2021 : ಕಿರೆಂ ರೆಮದಿ ಅಮ್ಮನವರ ಧರ್ಮಕೇಂದ್ರದ ವತಿಯಿಂದ ಕಳೆದ ಕೊರೊನಾ ವಿಷಮ ಪರಿಸ್ಥಿತಿಯ ಲೊಕ್ಡೌನ್ ಸಂದರ್ಭದಲ್ಲಿ ಧರ್ಮಕೇಂದ್ರದ ಪರಿಸರದ ಸರ್ವ ಧರ್ಮೀಯ 172 ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಹಾಗೂ ಔಷದಕ್ಕಾಗಿ ಆರ್ಥಿಕ ಸಹಾಯವನ್ನು ನೀಡಿದ್ದು ಪ್ರಶಂಸೆಗೆ ಪಾತ್ರವಾಗಿತ್ತು.

ಪ್ರಸ್ತುತ ಕೊರೊನಾ 2 ರ ಅಲೇಯಿಂದ ಹಾಗೂ ಲೊಕ್ಡೌನ್ ನಿಂದ ಜನರು ಸಂಕಷ್ಟಕ್ಕೀಡಾಗಿದ್ದುದನ್ನು ಮನಗಂಡು ಕೆಲವು ದಾನಿಗಳ ಹಾಗೂ ಧರ್ಮಕೇಂದ್ರದ ವತಿಯಿಂದ ಈ ಬಾರಿಯು ಸುಮಾರು 60 ಸರ್ವಧರ್ಮಿಯರ ಬಡ ಕುಟುಂಬಗಳಿಗೆ ಇಂದು ಆಹಾರ ದಿನಸಿ ಸಾಮಾಗ್ರಿಗಳನ್ನು ವಿತರಿಸಿಲಾಯಿತು ಹಾಗೂ ಲಭ್ಯವಿರುವ ವ್ಯಾಕ್ಸಿನೇಶನನ್ನು ಎಲ್ಲರೂ ತೆಗೆದು ಕೊಳ್ಳುವಂತೆ ಮಾಹಿತಿ ನೀಡಲಾಯಿತು. ಯಾವುದೇ ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಈ ಧರ್ಮಕೇಂದ್ರ ಸರ್ವಧರ್ಮಿಯರಿಗೆ ಸಹಾಯಮಾಡಲು ಸದಾ ಮೂಂಚೂಣಿಯಲ್ಲಿದೆ.

ಈ ಸಂಧರ್ಭದಲ್ಲಿ ಧರ್ಮಕೇಂದ್ರದ ಧರ್ಮಗುರುಗಳಾದ ವಂದನೀಯ ವಿಕ್ಟರ್ ಡಿ’ಮೆಲ್ಲೊ, ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಮಾನ್ ಸ್ಟೀವನ್ ಉಲ್ಲಾಸ್ ಡಿ’ಕುನ್ಹಾ, ಕಾರ್ಯದರ್ಶಿಯಾದ ಶ್ರೀಮಾನ್ ಮ್ಯಾಕ್ಸಿಮ್ ಪಿಂಟೊ ಮತ್ತು ಸಂಚಾಲಕರಾದ ಶ್ರೀಮಾನ್ ಸಂತಾನ್ ಡಿ’ಸೋಜರವರು ಉಪಸ್ಥಿತರಿದ್ದರು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: 2440524; 2440525; 8277937782

E-Mail: [email protected]