ಕೂಳೂರು, ಅ. 11: ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ, ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆದು ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ವಿಧಾನ ಪರಿಷತ್‍ನ ಮುಖ್ಯ ಸಚೇತಕ ಐವನ್ ಡಿ'ಸೋಜಾರವರು ಹೇಳಿದರು.

ಸಂತ ಅಂತೋನಿಯವರ ಚರ್ಚ್ ಕೂಳೂರು, ಇಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ, ಕ್ಯಾಟರಾಕ್ಟ್ ಶಸ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಹಾಗೂ ಜನರಲ್ ಮೆಡಿಕಲ್ ಶಿಬಿರವನ್ನು ಡಿವೈನ್ ವರ್ಡ್ ಟಿ.ವಿ ಮತ್ತು ವೆಸ್ಟರ್ನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ, ಕ್ಯಾಥೋಲಿಕ್ ಸಭಾ, ಐ.ಸಿ.ವೈ.ಎಂ ಘಟಕ ಕೂಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದಲ್ಲಿ ರವಿವಾರ ಅಕ್ಟೋಬರ್ 08 ರಂದು ನಡೆದ ಶಿಬಿರವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.

 

 

 

 

 

ಸಂತ ಅಂತೋನಿಯವರ ಚರ್ಚಿನ ಧರ್ಮಗುರು ವಿನ್ಸೆಂಟ್ ಡಿ'ಸೋಜಾರವರು ಅದ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಶಾಸಕ ಮೋಯ್ಯಿದೀನ್ ಬಾವರವರು ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇನ್ನೂ ಎಲ್ಲೆಡೆ ನಡೆಯಲಿ ಎಂದು ಹಾರೈಸಿದರು. ಕಾರ್ಪೊರೇಟರ್ ದಯಾನಂದ್ ಶೆಟ್ಟಿ, ಡಿವೈನ್ ವರ್ಡ್ ಟಿ.ವಿ ಮತ್ತು ವೆಸ್ಟರ್ನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ ಅಧ್ಯಕ್ಷರು ವಾಲ್ಟರ್ ಸ್ಟೀಫನ್ ಮೆಂಡಿಸ್ ಮತ್ತು ಫ್ಲೋರಾ ಮೆಂಡಿಸ್ , ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಡಾ. ಆಶೀಶ್ ಶೆಟ್ಟಿ ಮತ್ತು ಶ್ರಿ ಹರ್ಬರ್ಟ್, ಚರ್ಚಿನ ಉಪಾಧ್ಯಕ್ಷ ಎಫ್ರೆಮ್ ಫೆರಾವೊ, ಕ್ಯಾಥೋಲಿಕ್ ಸಭೆ ಅಧ್ಯಕ್ಷ ರುಡಾಲ್ಫ್ ಮಿಸ್ಕೀತ್, ಐ.ಸಿ.ವೈ.ಎಂ ಅಧ್ಯಕ್ಷ ಲೆಸ್ಟನ್ ಡಿ'ಸೋಜಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಲವೀನಾ ಡಿ'ಸೋಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕಿ ಶಾಂತಿ ಜಾನೆಟ್ ಮಿಸ್ಕೀತ್‍ರವರು ಸ್ವಾಗತಿಸಿದರು. ಕ್ಲೆವರ್ ಡಿ'ಸೋಜಾರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ವಂದಿಸಿದರು.

ಸುಮಾರು 850 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು. 265 ಜನರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.

 

 

 

 

 

 

 

 

 

 

 

 

 

 

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]