Dec 2 : ಶ್ರೀಮತಿ ಲಿಲ್ಲಿ ಲೋಬೊ ಮತ್ತು ಶ್ರೀಯುತ ರೋಬರ್ಟ್ ಲೋಬೊ ಇವರಿಂದ, ಚರ್ಚ್ ಪಾಲನಾ ಸಮಿತಿ, ವಾಳೆಯ ಗುರಿಕಾರರಿಗೆ ಹಾಗೂ ಇತರರಿಗೆ ಈ ಗಿಡವನ್ನು ಧರ್ಮಾರ್ಥವಾಗಿ ವಿತರಿಸಲಾಯಿತು, ಶ್ರೀಯುತ ರೋಬರ್ಟ್ ಲೋಬೊ ರವರು ಈ ಫಲವು ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಸಿಗಬೇಕೆಂದು ನಿರ್ಧರಿಸಿ, ತಮಗೆ ಓರ್ವ ಕ್ಯಾನ್ಸರ್ ಪೀಡಿತ ಮಹಿಳೆಯೋರ್ವರು ಉಚಿತವಾಗಿ ನೀಡಿದ ಗಿಡವನ್ನು ಬೆಳೆದು ಅದರಲ್ಲಿನ ಫಲ ತೆಗೆದು ಆ ಫಲದ ಬೀಜದಿಂದ ಸರಿ ಸುಮಾರು 100 ಗಿಡವನ್ನು ಬೆಳೆಸಿ ಕ್ಯಾನ್ಸರ್ ಪೀಡಿತರ ಕಾಳಜಿಯಿಂದ ಈ ಫಲದ ಗಿಡವನ್ನು ಉಚಿತವಾಗಿ ವಿತರಿಸಿರುತ್ತಾರೆ, ಕ್ಯಾನ್ಸರ್ ಎಂಬ ಖಾಯಿಲೆ ಯಾರಿಗೂ ಬರದಂತೆ ಮತ್ತು ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಈ ಫಲ ಶೀಘ್ರ ಪರಿಣಾಮ ಬೀರುತ್ತದೆ ಈ ಫಲದ ಗುಣಲಕ್ಷಣಗಳನ್ನು ಕೂಲಂಕುಷವಾಗಿ ಗಮನಿಸಿದ ಶ್ರೀಯುತ ರೋಬರ್ಟ್ ಲೋಬೊ ರವರು ಯಾವುದೇ ಹಣ-ಹೆಸರು ಮಾಡುವ ಇಚ್ಛೆಯಿಲ್ಲದೇ ಸಮಾಜದ ಒಳಿತಿಗಾಗಿ ಈ ಮಾದರಿ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.
ಉಚಿತ ಗಿಡ ಮತ್ತು ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9980887305.
Comments powered by CComment