Media Release

Photos : Stanly Bantwal

ದಿನಾಂಕ 16.02.2020 ಭಾನುವಾರದಂದು ಸಂಜೆ 5 ಗಂಟೆಗೆ ತಾರೀಕು 2.02.2020ರ ಭಾನುವಾರದಂದು ಮಡಂತ್ಯಾರಿನಲ್ಲಿ ನಡೆದ ‘ಕಥೊಲಿಕ ಮಹಾ ಸಮಾವೇಶ 2020’ ರ ಯಶಸ್ವಿಗಾಗಿ ಶ್ರಮಿಸಿದವರನ್ನು ಅಭಿನಂದಿಸಲು ಧನ್ಯತಾಪೂರಕವಾಗಿ ಅಭಿನಂದನಾ ಕಾರ್ಯಕ್ರಮವನ್ನು ಮಡಂತ್ಯಾರು ಚರ್ಚಿನ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರ ನೆನಪಿಗಾಗಿ ಮಡಂತ್ಯಾರು ಚರ್ಚ್ ಮೈದಾನದಲ್ಲಿ 3 ಗಿಡಗಳನ್ನು ನೆಡುವುದರ ಮೂಲಕ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ತದನಂತರ ಸೇಕ್ರೇಡ್ ಹಾರ್ಟ್ ಸಭಾ ಭವನದಲ್ಲಿ ಸುಮಾರು 800ಕ್ಕಿಂತಲೂ ಹೆಚ್ಚು ಸಮಾವೇಶಕ್ಕಾಗಿ ಶ್ರಮಿಸಿದವರು ಹಾಜರಿದ್ದು ಇವರಿಗೆ ಸನ್ಮಾನಿಸಲಾಯಿತು. ಮಡಂತ್ಯಾರಿನ ಸಹಾಯಕ ಧರ್ಮಗುರುಗಳಾದ ವಂದನೀಯ ಫಾ|ಸ್ಟ್ಯಾನಿ ಪಿಂಟೊ ರವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು. ತದನಂತರ ಕಾರ್ಯಕ್ರಮದ 14 ಸಂಯೋಜಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸೇಕ್ರೆಡ್ ಹಾರ್ಟ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ|ಜೆರೊಮ್ ಡಿಸೋಜ, ಸಹಾಯಕ ಧರ್ಮಗುರುಗಳಾದ ವಂದನೀಯ ಫಾ|ರೊನಾಲ್ಡ್ ಸೆರಾವೊ, ಬೆಳ್ತಂಗಡಿ ಧರ್ಮಪ್ರಾಂತ್ಯದ KSMCA ಯ ಡೈರೆಕ್ಟರ್ ವಂದನೀಯ ಫಾ| ಬಿನೊಯ್ ಇವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ರುವಾರಿಗಳಾದ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷರು ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತ, ಸಂಯೋಜಕರಾದ ಶ್ರೀ ಜೊಯೆಲ್ ಮೆಂಡೊನ್ಸಾ, ಕಾರ್ಯದರ್ಶಿಯವರಾದ ಶ್ರೀ ವಾಲ್ಟರ್ ಮೊನಿಸ್ ರವರನ್ನು ಚರ್ಚಿನ ಪ್ರಧಾನ ಧರ್ಮಗುರುಗಳು ಶಾಲು ಹೊದಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು.


ವೇದಿಕೆಯಲ್ಲಿ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತ, ಮಡಂತ್ಯಾರಿನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ|ಬೇಸಿಲ್ ವಾಸ್, ಸಹಾಯಕ ಧರ್ಮಗುರುಗಳಾದ ವಂದನೀಯ ಫಾ|ಸ್ಟ್ಯಾನಿ ಪಿಂಟೊ ಮತ್ತು ವಂದನೀಯ ಫಾ| ರೊನಾಲ್ಡ್ ಸೆರಾವೊ, ಪ್ರಾಂಶುಪಾಲರಾದ ವಂದನೀಯ ಫಾ|ಜೆರೊಮ್ ಡಿಸೋಜ, ಮಂಜೊಟ್ಟಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ| ಪ್ರವೀಣ್ ಡಿಸೋಜ, ಬೆಳ್ತಂಗಡಿ ಧರ್ಮಪ್ರಾಂತ್ಯದ KSMCA ಡೈರೆಕ್ಟರ್ ಆದ ವಂದನೀಯ ಫಾ|ಬಿನೊಯ್, ಕಥೊಲಿಕ ಮಹಾ ಸಮಾವೇಶ ಸಂಯೋಜಕರಾದ ಶ್ರೀ ಜೊಯೆಲ್ ಮೆಂಡೋನ್ಸಾ, ಕಾರ್ಯದರ್ಶಿ ಶ್ರೀ ವಾಲ್ಟರ್ ಮೊನಿಸ್, ಕಾರ್ಯಕ್ರಮದ ಸಂಯೋಜಕರುಗಳಾದ ಶ್ರೀ ಗ್ರೆಗೊರಿ ಸೆರಾವೊ, ಶ್ರೀ ಹ್ಯೂಬರ್ಟ್ ಲೋಬೊ, ಶ್ರೀ ಫಿಲಿಪ್ ಡಿಕುನ್ಹಾ, ಶ್ರೀ ಲಿಯೊ ರೊಡ್ರಿಗಸ್, ಶ್ರೀ ಡೆನಿಯಲ್ ಕ್ರಾಸ್ತಾ, ಶ್ರೀ ಜೆರೊಮ್ ಲೋಬೊ, ಶ್ರೀ ಐವನ್ ಸಿಕ್ವೇರಾ, ಶ್ರೀಮತಿ ಫ್ಲಾವಿಯಾ ಡಿಸೋಜ, ಶ್ರೀಮಾನ್ ಫ್ರಾನ್ಸಿಸ್ ವಿ.ವಿ., ಶ್ರೀ ಪೀಟರ್ ಜೆರಿ ರೊಡ್ರಿಗಸ್ ಮತ್ತು ಘಟಕದ ಕಾರ್ಯದರ್ಶಿಯಾದ ಶ್ರೀಮತಿ ಪ್ರಮೀಳಾ ಲೋಬೊ ಉಪಸ್ಥಿತರಿದ್ದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ ಉಠೋಪಚಾರದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]