ಸಂತ ಆಂತೋನಿ ಪುಣ್ಯ ಸ್ಮರಣಿಕೆಗಳ ಹಬ್ಬ ಮತ್ತು ಕೊರೊನವೈರಸ್ ರೋಗಿಗಳಿಗಾಗಿ ಪ್ರಾರ್ಥನೆ

Feb 14 : ಈ ವಿಷಯದ ಬಗ್ಗೆ ಫಾ. ಒನಿಲ್ ಡಿ’ಸೋಜ, ನಿರ್ದೇಶಕರು , ಸಂತ ಆಂತೋನಿ ಆಶ್ರಮ, ಜೆಪ್ಪು ಇವರಿಂದ ಪತ್ರಿಕಾ ಪ್ರಕಟಣೆ

" ಜೆಪ್ಪು ಸಂತ ಆಂತೋನಿ ಆಶ್ರಮ 122 ವರ್ಷಗಳ ಇತಿಹಾಸ ಇರುವ ಸಂಸ್ಥೆಯಾಗಿದ್ದು ನಿರ್ಗತಿಕರನ್ನು ನೋಡಿಕೊಳ್ಳುವ ಸಂಸ್ಥೆಯಾಗಿದೆ. ಪ್ರಸ್ತುತ ನಾವು 400 ನಿರ್ಗತಿಕರನ್ನು ನೋಡಿಕೊಳ್ಳುತ್ತಿದ್ದೇವೆ".

"ನಮ್ಮ ಸಂಸ್ಥೆಯ ಪಾಲಕರು ಸಂತ ಆಂತೋನಿಯವರು 1195ರಲ್ಲಿ ಜನಿಸಿ 1231ರಲ್ಲಿ ನಿಧನರಾದರು. ತಮ್ಮ ಕಿರುಜೀವಿತಾವಧಿಯಲ್ಲಿ ಯೇಸು ಸ್ವಾಮಿಯ ಹೆಸರಲ್ಲಿ ಆನೇಕ ಜರನ್ನು ಗುಣಪಡಿಸಿದ್ದರು. ಅವರು ನಿಧನರಾಗಿ 800 ವರ್ಷಗಳು ಕಳೆದಿವೆಯಾದರೂ ಇಂದಿಗೂ ಅವರ ನಾಲಗೆ ಮತ್ತು ಸ್ವರಗಂಟಲು ಜೀವಂತವಾಗಿ ಉಳಿದಿದೆ. ಈ ಪುಣ್ಯ ಸ್ಮರಣಿಕೆಗಳನ್ನು ಇಟೆಲಿಯ ಪಾದ್ವಾ ನಗರದ ಮಹಾದೇವಾಲಯದಲ್ಲಿ ಇರಿಸಲಾಗಿದೆ. ಈ ಪುಣ್ಯ ಸ್ಮರಣಿಕೆಗಳ ಗೌರಾವಾರ್ಥ ಫೆಬ್ರವರಿ 15ರಂದು ನಮ್ಮ ಆಶ್ರಮ ವತಿಯಿಂದ ಹಬ್ಬ ಆಚರಣೆ ಮಾಡುತ್ತೇವೆ. ಈ ಹಬ್ಬವನ್ನು ಮಿಲಾಗ್ರಿಸ್ ತೆರೆದ ಮೈದಾನದಲ್ಲಿನಡೆಸುತ್ತೇವೆ. ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ.ಎಲೋಶಿಯಸ್ ಪಾವ್ಲ್ ಡಿ’ಸೋಜರವರು ಸಾಯಾಂಕಾಲ 6 ಗಂಟೆಗೆ ಹಬ್ಬದ ಬಲಿಪೂಜೆ ಅರ್ಪಿಸುವರು".

"ಇತ್ತೀಚಿನ ದಿನಗಳಲ್ಲಿ ಕೊರೊನವೈರಸ್ ಬಗ್ಗೆ ಬಹಳಷ್ಟು ಭೀತಿ ಹರಡಿದ್ದು ಕಾಣುತ್ತೇವೆ. ಇದರ ಬಗ್ಗೆ ಸಾಕಾಷ್ಟು ಮಾಹಿತಿ ಮತ್ತು ಜಾಗೃತಿಯನ್ನು ನೀಡುವುದನ್ನು ನೋಡುತ್ತೇವೆ. ಇದರ ಜೊತೆಗೆ ರೋಗಿಗಳನ್ನು ಗುಣಪಡಿಸಿದ ಸಂತ ಆಂತೋನಿಯವರ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಸಾಯಾಂಕಾಲದ ಬಲಿಪೂಜೆಯ ನಂತರ 7.15 ಗಂಟೆಗೆ, ಸಾವಿರಾರು ಭಕ್ತಾಧಿಗಳು ಕೈಯಲ್ಲಿ ಉರಿಯುವ ಮೊಂಬತ್ತಿ ಹಿಡಿದು ಕೊರೊನಾ ವೈರಸ್‍ನಿಂದ ಜನರನ್ನು ಕಾಪಾಡುವುದಕ್ಕೊಸ್ಕರ ಪ್ರಾರ್ಥನೆಯನ್ನು ಇಟ್ಟುಕೊಂಡಿದ್ದೇವೆ. ಈ ಪ್ರಾರ್ಥನೆಯನ್ನು ಪೂಜ್ಯ ಬಿಷಪರು ನಡೆಸಿಕೊಡುವರು". 

"ತಾವು ಈ ಕಾರ್ಯಕ್ರಮಕ್ಕೆ ಬಂದು ಈ ವಿಷಯವನ್ನು ತಮ್ಮ ಮಾಧ್ಯಮ ಮುಖಾಂತರ ಜನರಿಗೆ ತಲುಪಿಸಬೇಕಾಗಿ ಈ ಮುಖಾಂತರ ಕೇಳಿಕೊಳ್ಳುತ್ತೇವೆ", ಎಂದು ಫಾ. ಒನಿಲ್ ಡಿ’ಸೋಜ ಮಾಧ್ಯಮ ಪ್ರತಿನಿಧಿಗಳನ್ನು ವಿನಂತಿಸಿಕೊಂಡರು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]