Media Release

ಮಾರ್ಚ್ 14, ಭಾನುವಾರದಂದು ಸಂತ ಆಂತೋನಿ ಆಶ್ರಮದಲ್ಲಿ ಸಾಯಾಂಕಾಲ 5 ಗಂಟೆಗೆ ದೃಶ್ಯರೂಪಕ ಶಿಲುಬೆ ಹಾದಿಯ ಭಕ್ತಿ ಕಾರ್ಯಕ್ರಮ ಜರಗಲಿದೆ. ಈ ಭಕ್ತಿಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಶ್ರೀ ಪ್ರೇಮ್ ಕುಮಾರ್ ಲೋಬೊರವರು ತಯಾರು ಮಾಡಿದ ಕೊರೊನಾ ಹಿನ್ನೆಲೆಯ ಶಿಲುಬೆ ಹಾದಿ, ಮೊಗಾಚಿಂ ಲ್ಹಾರಾಂ ಖ್ಯಾತಿಯ ಶ್ರೀ ವಿನ್ಸೆಂಟ್ ಫೆರ್ನಾಂಡಿಸ್‍ರವರ ತಂಡದಿಂದ ದೃಶ್ಯ ರೂಪಕಗಳು, ಜೆಪ್ಪು ಸಂತ ಜೋಸೆಫ್ ಗುರುಮಠದ ರೆಕ್ಟರ್ ವಂದನೀಯ ಡಾ. ರೊನಾಲ್ಡ್ ಸೆರಾವೊರವರಿಂದ ಪ್ರವಚನ ಹಾಗೂ ಶ್ರೀ ಆಲ್ವಿನ್ ಡಿ’ಸೋಜ ಮತ್ತು ತಂಡದವರಿಂದ ತಪಸ್ಸು ಕಾಲದ ಭಕ್ತಿಗಿತೆಗಳು ಇರುವುವು.

ಫೆಬ್ರವರಿ 17 ರಿಂದು ಜಗತ್ತಿನಾದ್ಯಂತ ಕ್ರೈಸ್ತರು 40 ದಿನಗಳ ತಪಸ್ಸು ಕಾಲ ಆರಂಭ ಮಾಡಿದ್ದಾರೆ. ಯೇಸುಸ್ವಾಮಿ 40 ದಿನಗಳ ಕಾಲ ಅನ್ನ-ನೀರಿಲ್ಲದೆ ಪ್ರಾರ್ಥನೆಯಲ್ಲಿ ಕಳೆದ ಸಮಯವನ್ನು ಈ ಸಂಧರ್ಭದಲ್ಲಿ ಧ್ಯಾನಿಸಲಾಗುತ್ತದೆ. ಹಾಗೂ ತಮ್ಮ ಜೀವನದ ಕೊನೆಯ ತಾಸುಗಳಲ್ಲಿ ಪಟ್ಟ ಕಷ್ಟಗಳನ್ನು ಶಿಲುಬೆ ಹಾದಿಯ ಭಕ್ತಿಯಲ್ಲಿ ನೆನೆಯಲಾಗುತ್ತದೆ. ಸುಮಾರು 40 ಮಂದಿ ಗಾಯಕರು ಮತ್ತು ಕಲಾವಿದರು ಈ ಭಕ್ತಿ ಕಾರ್ಯಕ್ರಮದಲ್ಲಿ ಅಭಿನಯಿಸಲಿರುವರು ಎಂದು ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿ’ಸೊಜರವರು ತಿಳಿಸಿದ್ದಾರೆ.

 

 

 

 

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]