28 ಫೆಬ್ರವರಿ 1928ರಂದು ಭಾರತೀಯ ಭೌತಶಾಸ್ತ್ರಜ್ಞ ಸರ್. ಸಿ. ವಿ. ರಾಮನ್‍ರವರು, ರಾಮನ್ ಪರಿಣಾಮವನ್ನು ಪತ್ತೆಹಚ್ಚಿದುದರ ದಿನವನ್ನು “ರಾಷ್ಟ್ರೀಯ ವಿಜ್ಞಾನ ದಿನ”ವನ್ನಾಗಿ ಪ್ರತಿವರ್ಷ ಫೆಬ್ರವರಿ 28ರಂದು ಆಚರಿಸಲಾಗುತ್ತದೆ.


ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು ತಿಳಿಸುವುದರ ಮೂಲಕ, ವಿಜ್ಞಾನ ದಿನಾಚರಣೆಗೆ ಚಾಲನೆ ನೀಡಲಾಯಿತು. ಅಂದು 6 ಮತ್ತು 7ನೇ ತರಗತಿಯ ಸುಮಾರು 40 ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿದ ವಿವಿಧ, ಆಕರ್ಷಕ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಅದರಲ್ಲೂ ಚಲಿಸುವ ರೋಬೋಟ್, ನೀರಿನ ಚಕ್ರ, ಆಮ್ಲಮಳೆ, ವಿದ್ಯುತ್ ವಿಭಜನೆಯ ಮೂಲಕ ಆಮ್ಲಜನಕ, ಜಲಜನಕಗಳ ಉತ್ಪಾದನೆ, ಸೋಲಾರ್ ಕಾರು, ಪವನ ಯಂತ್ರ ಮುಂತಾದ ಮಾದರಿಗಳು ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದವು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಮಾದರಿಗಳನ್ನು ವೀಕ್ಷಿಸಿ, ಅವುಗಳ ವಿವರಣೆ ತಿಳಿದು ವಿಜ್ಞಾನ ದಿನದ ಸಂಪೂರ್ಣ ಲಾಭವನ್ನು ಪಡೆದರು.


ಈ ದಿನಾಚರಣೆಯನ್ನು ಮುಖ್ಯ ಗುರುಗಳ ಮುಂದಾಳತ್ವದಲ್ಲಿ, ವಿಜ್ಞಾನ ಶಿಕ್ಷಕರ ಮಾರ್ಗದರ್ಶನ ಹಾಗೂ ಇತರ ಶಿಕ್ಷಕರ ಸಹಕಾರದೊಂದಿಗೆ ಯಶಸ್ವಿಯಾಗಿ ಆಚರಿಸಲಾಯಿತು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]