ST JOSEPH VAZ ‘who performed miracles on the hill of Mudipu, has been raised to the altar of sainthood ON 14th JANUARY 2015 by Pope Francis in Sri Lanka.

A priest from coastal region is raised to the altar of sainthood for the first time in the book of history.

On 14th January 2016, we have solemn mass at 10.30 am for the sick and disabled. It will be offered by Rev. Fr. Vijay Machado, Director DBCLC, Mangalore.

On15th January 2016, we have solemn festal mass at 10.30 am by Most Rev Dr. Aloysius Paul D’ Souza (Bishop of Mangalore Diocese). At 2.00 pm. by V. Rev. Fr. J.B. Saldanha , Vicar Forane, Mangalore South Deanery and at 6.00 pm by Rt. Rev. Dr. Pius Thomas D’ Souza.

On 16th January 2016, we have solemn festal mass at 10.30 am by Rev. Fr. Gregory D’ Souza, Most Holy Saviour Church, Agrar. At 2.00pm by Rev. Fr. William Menezes , PRO – Mangalore Diocese and at 6.00.pm by Rt. Rev. Msgr. Denis Moras Prabhu.

ANNA SANTARPANE

(To all the pilgrims on all the feast days 12.30pm -2.00pm.)

There will be Votive offering procession on 10th January 2016 at 3.30pm from Mudipu Church to St. Joseph Vaz Shrine at Miracle hill.

During the year on EVERY FRIDAY there is Adoration, Confession, & Novena Prayers are held from10.00am to 12.30pm followed by lunch for all the pilgrims.

LIFE OF ST. JOSEPH VAZ

Joseph Vaz was born on 21 April 1651 in Benovlim; Goa. He was the third son of Christopher Vaz and Miranda of Goa. He became a priest in 1676 and served in different parishes of Goa till 1681. Later he was sent to Canara, Fr. Joseph Vaz travelled from Goa barefoot. He had served in Honnavar, Basrur, Kundapura, Gangoli, Mulki, Mangalore and Ullal Panir. He was miraculously saved from an attempt on his life in 1684, when he was serving as the parish priest of Panir Church. His ambition was to work as a missionary in Sri Lanka. He entered Sri Lanka in 1687 as a laborer defying a ban on catholic priests. He served in various places in Sri Lanka braving all odds, thus rekindling the Christian faith in Sri Lanka. He died on 16 January 1711.

Fr.Joseph Vaz was a courageous soldier of Christ, a dedicated Indian missionary and a humble servant of God. Recognizing his missionary work Pope John Paul II proclaimed him as blessed Joseph Vaz in Colombo on 21st January 1995. He is venerated as the “APOSTLE OF SRI LANKA” and the “PATRON OF GOA”.

THE MIRACLE HILL AT MUDIPU, MANGALORE

Mudipu is a confluence of magnificence, meditation and miracles, an abode of peace and tranquility, is a tiny village by the Mangalore –Vittal road. Even though about 25km away from Mangalore city it attracts thousands of pilgrims from far and wide. It is the first church in India which is dedicated to St. Joseph Vaz. The afflicted people who flock here are richly blessed; with many spiritual and material boons. The scenic beauty, serene atmosphere and clean caressing breeze of the miracle mountain have not only heightened the devotion and piety among people it also soothed their hearts and also made it an attractive pilgrimage centre.

The Patron of Mudipu Church St. Joseph Vaz is an Indian. He was born in Goa in 1651. Having been ordained a priest he came to our land, then it was called Canara. His sole objective was to show salvific way to our people. He was appointed as the parish priest of Ullal- Panir. Some deviant Catholics plotted against him. One day they came and requested him to anoint a sick person. The benevolent priest readily agreed and began with them. As soon as they reached Mudipu hill, a deserted place, they attempted to kill him. The priest immediately struck his stick to the ground, knelt down and began to pray. And suddenly! A miracle happened: water sprang from the three different directions. People who came to kill the priest ran for their lives. God saved Fr. Joseph Vaz in a miraculous way and those three springs still bear witness to the bygone graced event. It is special because the adjacent 60 feet well does not have water. The faithful believe that the water from these miraculous ponds has healing power. It soothes pain: heals infirmities and if one prays with devotion fulfills the desires. Therefore the people of the vicinity call on his name for many spiritual and materials benefits.


ಸಂತ ಜೋಸೆಫ್ ವಾಜ್

ಏಶಿಯಾದ ಮಿಶ್ಯೊನರಿ, ಶ್ರೀಲಂಕಾದ ಪ್ರೇಶಿತರು, ಕೆನರಾದ ರಾಯಾಭಾರಿ, ಗೋವಾದ ನಕ್ಷತ್ರ ಹಾಗೂ ಭಾರತೀಯ ಯೋಗಿ ಹೀಗೆ ಹತ್ತು ಹಲವಾರು ವಿಶೇಷ ಹೆಸರುಗಳಿಂದ ಕರೆಯಲ್ಪಡುವ ಸಂತ ಜೋಸೆಫ್ ವಾಜ್‍ರವರು ಜಗತ್ತಿಗೆ ಆಜ್ಞಾತರಾಗಿದ್ದರು. ಒಂದು ವಿಷರ್ಯಾಸವೆನ್ನಬಹುದು. ಕೊನೆಗೂ ಅವರ ದಿವ್ಯ ವ್ಯಕ್ತಿತ್ವದ ನಿಜ ಸ್ವರೂಪವನ್ನರಿತು ಜಗದ್ಗುರು ಪೋಪ್ ಫ್ರಾನ್ಸಿಸ್‍ರವರು 2015ರ ಜನವರಿ 14ರಂದು ಅವರಿಗೆ ಸಂತ ಪದವಿ ಪ್ರಧಾನ ಮಾಡಿದ್ದು ನಮಗೆಲ್ಲರಿಗೂ ಹೆಮ್ಮೆಯ ಹಾಗೂ ಅಭಿಮಾನದ ವಿಷಯವಾಗಿದೆ.

ಸಂತ ಜೋಸೆಫ್ ವಾಜ್‍ರವರು 21 ಎಪ್ರಿಲ್ 1651ರ ಶುಕ್ರವಾರದಂದು ಜನಿಸಿದರು. ಗೋವಾದ ಧರ್ಮಬೀರುಚಿವುಳ್ಳ ಕುಟುಂಬದ ಕ್ರಿಸ್ಟೋಫರ್ ವಾಜ್ ಹಾಗೂ ವiರಿಯ ಮಿರಾಂದಾರವರ ಮೂರನೇ ಮಗುವಾಗಿ ಜೋಸೆಫ್ ವಾಜ್ ಜನಿಸಿದ ಸಂದರ್ಭದಲ್ಲಿ ಹಾಡುಹಗಲೇ ಕ್ರಿಸ್ಟೋಫರ್ ವಾಜ್‍ರವರಿಗೆ ನಕ್ಷತ್ರದ ದರ್ಶನವಾಗಿ ಮುಂದೊಂದು ದಿನ ಈ ಮಗು ವಿಶಿಷ್ಟ ಕಾರ್ಯಗಳನ್ನು ಮಾಡಲಿರುವುದು ಎಂಬ ಭಾವನೆ ಮೂಡಿಸಿತ್ತು.

ಪ್ರೀತಿ, ಪ್ರೇಮ, ವಾತ್ಸಲ್ಯ ಹಾಗೂ ದೈವ ಸಾನಿಧ್ಯದ ವಾತಾವರಣದಲ್ಲಿ ಬೆಳೆದ ಜೋಸೆಫ್ ಹೆಸರಾಂತ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಾರೆ. ಈ ಸಂದರ್ಭದಲ್ಲಿ ಯೇಸು ಸ್ವಾಮಿಯ ಕರೆಗೆ ಓಗೊಟ್ಟು ಅವರು ಸಂತ ತೊಮಾಸ್ ಅಕ್ವಿನಾಸ್ ಸೆಮಿನರಿಯಲ್ಲಿ ಯಾಜಕ ತರಭೇತಿ ಪಡೆಯಲು ಸೇರ್ಪಡೆಯಾಗುತ್ತಾರೆ ಹಾಗೂ ಕ್ರಿ. ಶ. 1676ರಲ್ಲಿ ಯಾಜಕರಾಗಿ ಅಭಿಶೇಕಗೊಳ್ಳುತ್ತಾರೆ.

ಜೋಸೆಫ್ ವಾಜರಿಗೆ ಮೇರಿ ಮಾತೆಯವರಲ್ಲಿ ಅಪಾರ ಪ್ರೀತಿ - ಶ್ರದ್ಧೆ ಹಾಗೂ ಭಕ್ತಿ. ಅಂದು ಅವರು ಸಾಂಕ್ವಾಲದ ದೇವಮಂದಿರದಲ್ಲಿ ಮೇರಿಮಾತೆಗೆ ತನ್ನನ್ನು ಗುಲಾಮನಾಗಿ ಸಮರ್ಪಿಸುತ್ತಾರೆ ಹಾಗೂ ಒಂದು ಕರಾರುಪತ್ರ ಬರೆದು ತನ್ನ ರಕ್ತದಿಂದ ಅದಕ್ಕೆ ಸಹಿ ಹಾಕುತ್ತಾರೆ.

ಇದೇ ವೇಳೆ ಶ್ರೀಲಂಕಾ ದ್ವೀಪದಲ್ಲಿ ಕಥೊಲಿಕ ಕ್ರೈಸ್ತರ ಮರಣ ಹೋಮ ನಡೆಯುತ್ತಿರುವುದು ಅವರಿಗೆ ತಿಳಿದು ಬರುತ್ತದೆ. ಅಲ್ಲಿನ ಡಚ್ಚ್ ಕಾಲ್ವಿನಿಸ್ತ್ ಪಂಥದವರು ಅಲ್ಲಿರುವ ಕಥೊಲಿಕ ಧರ್ಮಗುರುಗಳನ್ನು ಗಡಿಪಾರು ಮಾಡಿ, ಅಲ್ಲಿನ ಕಥೊಲಿಕ ಕ್ರೈಸ್ತರಿಗೆ ಚಿತ್ರಹಿಂಸೆ ನೀಡಿ ಮತಾಂತರ ಮಾಡುತ್ತಾರೆ. ಆದರೂ ಹಲವಾರು ಕಥೊಲಿಕರು ಗುಪ್ತವಾಗಿ ತಮ್ಮ ವಿಶ್ವಾಸವನ್ನು ಕಾಯ್ದುಕ್ಕೊಂಡು ಜೀವಿಸುತ್ತಿದ್ದರು.

ಜೋಸೆಫ್ ವಾಜರು ಅಲ್ಲಿಗೆ ತೆರಳಿ ಅಲ್ಲಿನ ಕಥೊಲಿಕರಿಗೆ ನೆರವಾಗಲು ತನ್ನ ಹಿರಿಯರಲ್ಲಿ ಅನುಮತಿ ಕೇಳುತ್ತಾರೆ. ಆದರೆ ಹಿರಿಯ ಗುರುಗಳು ಅದನ್ನು ತಿರಸ್ಕರಿಸಿ ಗೊಂದಲದ ಗೂಡಾದ ಕೆನರಾ ಪ್ರಾಂತ್ಯಕ್ಕೆ ಅವರನ್ನು ಕಳುಹಿಸುತ್ತಾರೆ. ಜೋಸೆಫ್‍ವಾಜರು ಉತ್ತರ ಕನ್ನಡ, ದಕ್ಷಿಣ ಕನ್ನಡಗಳಲ್ಲಿ ಬರಿಗಾಲಲ್ಲಿ ನಡೆದಾಡಿ ಯೇಸುವಿನ ಶುಭಸಂದೇಶ ಸಾರಿ ಇಲ್ಲಿನ ಕ್ರೈಸ್ತರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಾರೆ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಉಳ್ಳಾಲ ಪರಿಸರದಲ್ಲಿ ಸೇವೆ ನೀಡುವಾಗ ಅವರ ವೈರಿಗಳು ಅವರನ್ನು ಕೊಲ್ಲಲು ಸಂಚು ರೂಪಿಸುತ್ತಾರೆ. ರೋಗಿಯೊಬ್ಬರಿಗೆ ಪರಮ ಪ್ರಸಾದ ನೀಡುವ ನೆಪದಲ್ಲಿ ಮಧ್ಯರಾತ್ರಿ ಮುಡಿಪು ಗುಡ್ಡಕ್ಕೆ ಅವರನ್ನು ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅವರನ್ನು ಕೊಲ್ಲಲು ಅಣಿಯಾದಾಗ ಜೋಸೆಫ್‍ವಾಜರು ಮೊಣಕಾಲೂರಿ ಪ್ರಾರ್ಥನೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಮುಗಿಲೊಡೆದು ಗುಡುಗು ಮಿಂಚುಗಳು ಕಾಣತೊಡಗಿದವು, ಇತ್ತ ನೆಲದಿಂದ ಮೂರು ನೀರಿನ ಬುಗ್ಗೆಗಳು ಮೇಲಕ್ಕೆ ಚಿಮ್ಮುತ್ತವೆ, ಮಾತ್ರವಲ್ಲಾ ಆ ಪ್ರದೇಶ ಸಂಪೂರ್ಣ ಪ್ರಜ್ವಲಿತ ಪ್ರದೇಶವಾಗಿ ಮಾರ್ಪಡುತ್ತದೆ. ಈ ವಿಸ್ಮಯವನ್ನು ನೋಡಿದ ಅವರ ವೈರಿಗಳು ಭಯಭೀತರಾಗಿ ಕತ್ತಲಲ್ಲಿ ಕರಗಿ ಓಟ ಕೀಳುಯುತ್ತಾರೆ. ಈ ಪವಾಡ ನಡೆದ ನಿರ್ಜನ ಪ್ರದೇಶವೇ ಇಂದಿನ ಪ್ರಸಿದ್ಧ ಕಾರಣಿಕ ಸ್ಥಳ; ಮುಡಿಪುವಿನ ಸಂತ ಜೋಸೆಫ್ ವಾಜರ ಪುಣ್ಯಕ್ಷೇತ್ರ.

ಶ್ರೀಲಂಕಾದ ಕ್ರೈಸ್ತರ ಬಗ್ಗೆ ಹೃದಯ ಮಿಡಿತವನ್ನು ತಾಳದೇ ಲುಂಗಿ ಉಟ್ಟು ಓರ್ವ ಕೂಲಿಯಾಳಾಗಿ ಅವರು ಹಡಗಿನ ಮೂಲಕ ಶ್ರೀಲಂಕಾ ಪ್ರವೇಶಿಸುತ್ತಾರೆ. ಕೊರಳಲ್ಲಿ ಜಪಮಾಲೆ ಧರಿಸಿ ಮನೆಮನೆಗಳಲ್ಲಿ ಭಿಕ್ಷಾಬನೆ ಮಾಡುತ್ತಾರೆ. ಇವರ ದಿವ್ಯ ವ್ಯಕ್ತಿತ್ವವನ್ನು ಅರಿತ ಅಲ್ಲಿನ ಗುಪ್ತ ಕಥೋಲಿಕರಿಗೆ ಇವರು ಯಾಜಕರೆಂದು ತಿಳಿಯುತ್ತದೆ. 30 ವರ್ಷಗಳ ಬಳಿಕ ದಿವ್ಯ ಬಲಿ ಬಲಿಪೂಜೆ ಅರ್ಪಿತಲಾಗುತ್ತದೆ.

ಯಾಜಕರೊಬ್ಬರು ಗುಪ್ತವಾಗಿ ಶ್ರೀಲಂಕಾದಲ್ಲಿರುವುದನ್ನು ಅರಿತ ಓರ್ವ ಅಧಿಕಾರಿಯು ಜೋಸೆಫ್‍ವಾಜರನ್ನು ಬಂಧಿಸುವಂತೆ ರಾಜ ವಿಮಲ ಧರ್ಮ ಸೂರ್ಯನಿಗೆ ಕಿವಿಯಾಡುತ್ತಾನೆ. ಪೋರ್ಚುಗೀಸರ ಬೇಹುಗಾರನೆಂದು ಆರೋಪಿಸಿ ಅವರನ್ನು ಜೈಲಿಗೆ ತಳ್ಳಲಾಗುತ್ತದೆ.

ಇದೇ ವೇಳೆ ಶ್ರೀಲಂಕಾದಲ್ಲಿ ಭೀಕರ ಬರಗಾಲ ಪ್ರಾರಂಭವಾಗುತ್ತದೆ. ಮಳೆ ಇಲ್ಲದೆ, ಕುಡಿಯಲು ನೀರಿಲ್ಲದೆ ಜನರು ಹಾಗೂ ಜನುವಾರುಗಳು ಹುಳುಗಳಂತೆ ಸಾಯುತ್ತಾರೆ. ಜೋಸೆಫ್ ವಾಜರ ಸಾತ್ವಿಕ ಜೀವನವನ್ನು ಅರಿತಿದ್ದ ರಾಜನು ಮಳೆಗಾಗಿ ಪ್ರಾರ್ಥಿಸುವಂತೆ ಅವರಲ್ಲಿ ವಿನಂತಿಸುತ್ತಾನೆ.

ವಿಶಾಲ ಮೈದಾನದಲ್ಲಿ ವೇದಿಕೆಯೊಂದನ್ನು ನಿರ್ಮಿಸಿ ಅದರಲ್ಲೊಂದು ಶಿಲುಬೆಯನ್ನಿಟ್ಟು ಜೋಸೆಫ್ ವಾಜರು ಪ್ರಾರ್ಥನೆ ಮಾಡುತ್ತಾರೆ. ಆಶ್ಚರ್ಯವೆಂಬಂತೆ ಎಲ್ಲರೂ ನೋಡುತ್ತಿದ್ದಂತೆ ದಾರಾಕಾರ ಮಳೆ ಸುರಿಯುತ್ತದೆ. ಈ ಪವಾಡವನ್ನು ಕಂಡ ರಾಜನು ಸಂಪೂರ್ಣ ಪರಿವರ್ತನೆಗೊಂಡು ಜೋಸೆಫ್ ವಾಜರಿಗೆ ಧರ್ಮ ಸಾರಲು ಸಂಪೂರ್ಣ ಅನುಮತಿ ಹಾಗೂ ಸಹಕಾರ ನೀಡುತ್ತಾರೆ.

ಮುಂದಿನ ಪವಾಡಮಯ ಘಟನೆಗಳೆಲ್ಲವೂ ಕನಸಿನಂತೆ ಮುಂದುವರೆಯುತ್ತವೆ. ಹೀಗೆ ಹಲವಾರು ಗುರುಗಳು ಶ್ರೀಲಂಕಾಗೆ ಆಗಮಿಸುತ್ತಾರೆ. ಇಗರ್ಜಿಗಳು, ಆರಾಧನಾಲಯಗಳು, ಆಸ್ಪತ್ರೆಗಳು ಹಾಗೂ ವಿದ್ಯಾ ಸಂಸ್ಥೆಗಳು ಪ್ರಾರಂಭವಾಗುತ್ತದೆ. ತನ್ನ ನಿರಂತರ ಸೇವೆ ಹಾಗೂ ಪರಿಶ್ರಮದಿಂದ ಜರ್ಜರಿತರಾದ ಜೋಸೆಫ್ ವಾಜರು 1711ನೇ ವರ್ಷ ಜನವರಿ 16ರಂದು ಅವರು ನಿಧನರಾಗುತ್ತಾರೆ ಈ ಮೂಲಕ ತನ್ನ ಆತ್ಮವನ್ನು ದೇವರಿಗೆ ಒಪ್ಪಿಸಿ ಈ ಲೋಕದ ಪಯಣವನ್ನು ಕೊನೆಗೊಳಿಸಿದರು.

ತನ್ನ 60 ವರ್ಷಗಳ ಜೀವಿತಾವಧಿಯಲ್ಲಿ 35 ವರ್ಷಗಳ ಯಾಜಕ ಸೇವೆಯಲ್ಲಿ 24 ವರ್ಷಗಳನ್ನೂ ಅವರು ಶ್ರೀಲಂಕಾದಲ್ಲಿ ಸಮರ್ಪಿಸಿದರು. ತನ್ನ ಸೇವಾಧಿಯಲ್ಲಿ ಶ್ರೀಲಂಕಾದಲ್ಲಿ 15 ಧರ್ಮಕೇಂದ್ರಗಳು, 400 ಆರಾಧನಾಲಯಗಳು, ಹಲವಾರು ಆಸ್ಪತ್ರೆಗಳು, ಅನಾಥಾಶ್ರಮಗಳನ್ನು ಹಾಗೂ ಶಾಲೆಗಳನ್ನು ಸ್ಥಾಪಿಸಿ ಜನರ ಹೃದಯದಲ್ಲಿ ಅಜರಾಮರವಾದ ಸಂತ- ನಮ್ಮ ಮಣ್ಣಿನ ಮಗ ಇಂದಿನ ಸಂತ ಜೋಸೆಫ್ ವಾಜ್.

ಜನವರಿ 14, 15 ಮತ್ತು 16, 2016 ರಂದು ಸಂತ ಜೋಸೆಫ್ ವಾಜಾರ ಪವಾಡ ಬೆಟ್ಟದ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವವು ಜರಗಲಿರುವುದು.

14.01.2016 ಬೆಳಿಗ್ಗೆ 10.30ಕ್ಕೆ ವ್ಯಾದಿಷ್ಟರಿಗೋಸ್ಕರ ಪೂಜೆ ಹಾಗೂ ಪ್ರಾರ್ಥನಾ ವಿಧಿ.

15.01.2016 ಬೆಳಿಗ್ಗೆ 10.30ಕ್ಕೆ ಕೃತಜ್ಞಾತಾ ಪೂಜೆ - ಪರಮ ಪೂಜ್ಯಾ ಧರ್ಮಾಧ್ಯಕ್ಷರು ವಂ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ, ಮಂಗಳೂರು ಧರ್ಮಪ್ರಾಂತ್ಯ. ಅಪರಾಹ್ನ 2.00 ಗಂಟೆಗೆ ಅ|ವಂ|ಫಾ| ಜೆ.ಬಿ. ಸಲ್ಡಾನಾ, ಪ್ರಧಾನ ಗುರುಗಳು ಮಂಗಳೂರು ದಕ್ಷಿಣ ವಲಯ ಮತ್ತು ಸಂಜೆ 6.00ಕ್ಕೆ ವಂ|ಡಾ| ಪಿಯುಸ್ ತೊಮಾಸ್ ಡಿ’ ಸೋಜ, ಅಜ್ಮೀರ್ ಧರ್ಮಪ್ರಾಂತ್ಯ.

16.01.2016 ಬೆಳಿಗ್ಗೆ 10.30ಕ್ಕೆ ಕೃತಜ್ಞಾತಾ ಪೂಜೆ - ಪರಮ ಪೂಜ್ಯಾ ಧರ್ಮಾಧ್ಯಕ್ಷರು ವಂ| ಫಾ| ಗ್ರೆಗೊರಿ ಡಿ’ ಸೋಜ, ಧರ್ಮಗುರುಗಳು, ಅಗ್ರಾರ್. ಅಪರಾಹ್ನ 2.00 ಗಂಟೆಗೆ ವಂ|ಫಾ| ವಿಲ್ಲಿಯಂ ಮಿನೇಜಸ್, PRO ಮಂಗಳೂರು ಧರ್ಮಪ್ರಾಂತ್ಯ ಮತ್ತು ಸಂಜೆ 6.00ಕ್ಕೆ ಅ| ವಂ| ಮೊ| ಡೆನ್ನಿಸ್ ಪ್ರಭು ಶ್ರೇಷ್ಠ ಗುರುಗಳು, ಮಂಗಳೂರು ಧರ್ಮಪ್ರಾಂತ್ಯ.

Add comment


Security code
Refresh

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]